NAMMAUK Blood - Slunečnice.cz Hlavní navigace

 NAMMAUK Blood 1.1

Pro hodnocení programu se prosím nejprve přihlaste

Staženo 0 ×
Zdarma

Sdílet

ಒಂದು ಹನಿ, ಒಂದು ಜೀವ.....

"ಉತ್ತರ ಕನ್ನಡ ಜಿಲ್ಲಾ ರಕ್ತದಾನಿಗಳ ವಿವರ ನೋಂದಣಿ ಅಭಿಯಾನ"

ಆತ್ಮೀಯರೆ..
"ರಕ್ತದಾನ..ಶ್ರೇಷ್ಠ ದಾನ"..
ಸಮಯಕ್ಕೆ ಸರಿಯಾಗಿ ನೀಡಿದ ಒಂದು ಹನಿ ರಕ್ತ..
ಒಬ್ಬ ತಂದೆ,ತಾಯಿ,ಅಣ್ಣ,ತಮ್ಮ,ಅಕ್ಕ, ತಂಗಿ,ಅಜ್ಜ,ಅಜ್ಜಿ,....ನಮ್ಮ ನಿಮ್ಮೆಲ್ಲರ ಕುಟುಂಬದ ಒಂದು ಜೀವವನ್ನು ಉಳಿಸಲು ಸಹಾಯಕಾರಿ ಆಗಬಹುದು...

ಈ ನಿಟ್ಟಿನಲ್ಲಿ ನಮ್ಮ ಯುಕೆ ತಂಡ.
ಉತ್ತರ ಕನ್ನಡ ಜಿಲ್ಲಾ ರಕ್ತದಾನಿಗಳ ವಿವರ ನೋಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾದ್ಯಾಂತ ರಕ್ತದಾನಿಗಳ ಹೆಸರು, ರಕ್ತದ ಗುಂಪು, ಊರು, ದೂರವಾಣಿ ಸಂಖ್ಯೆಯ ವಿವರಗಳನ್ನು ಒಂದೆಡೆ ಕಲೆಹಾಕಿ, ಸಮಯ ಸಂದರ್ಭಕ್ಕೆ
ರಕ್ತದ ಕೊರತೆಯಿಂದ ಸಾವಿನೊಂದಿಗೆ ಹೋರಾಡುತ್ತಿರುವವರಿಗೆ ಸಕಾಲಕ್ಕೆ ನೆರವಾಗುವ ಪ್ರತಿಜ್ನೆ ಕೈಗೊಂಡಿದೆ..
ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ನೆರವು
ನೀಡುವ ಚಿಕ್ಕ ಕೊಡುಗೆಯಲ್ಲಿ ಸರ್ವರೂ ಕೈ ಜೋಡಿಸಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ..
ತಾವುಗಳೆಲ್ಲರೂ ಮಾಡಬೇಕಾದ್ದು ಇಷ್ಟೇ.
ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಹೆಸರು:
ದೂರವಾಣಿ ಸಂಖ್ಯೆ:
ರಕ್ತದ ಗುಂಪು:
ನಮೂದಿಸಿದರೆ ಆಯಿತು..‌ತಮ್ಮೆಲ್ಲರ ವಿವರಗಳು ದಾಖಲಾಗುತ್ತವೆ"
ರಕ್ತ ಬೇಕಾದಲ್ಲಿ ಆ್ಯಪ್ ನಲ್ಲಿ ರಕ್ತದ ಗುಂಪು ಸೆಲೆಕ್ಟ ಮಾಡಿದರೆ ದಾನಿಗಳ ಹೆಸರು, ಫೋನ್ ನಂಬರ್ ಲಭ್ಯ, ಫೋನ್ ನಂಬರ್ ಮೇಲೆ ಕ್ಲಿಕ್ ಮಾಡಿ, ನೇರವಾಗಿ ದಾನಿಗಳನ್ನು ಸಂಪರ್ಕಿಸಿ..
ಒಮ್ಮೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಇಂಟರ್ ನೆಟ್ ಇಲ್ಲದೆಯು ಉಪಯೋಗಿಸಬಹುದು..
ಜಿಲ್ಲೆಯಾದ್ಯಂತ
ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತದ ಸರಬರಾಜನ್ನು ಮಾಡಿಸಿಕೊಡುವ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದೇ "ಉತ್ತರ ಕನ್ನಡ ಬ್ಲಡ್ ಡೊನರ್ಸ್ ಡೇಟಾ ಬ್ಯಾಂಕ್" ಮೂಲ ಉದ್ದೇಶ
ತಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಾ...

ನಮ್ಮ ಯುಕೆ ಎಡ್ಮಿನ್ ಹಾಗೂ ಸದಸ್ಯರ ಬಳಗ‌.

Blood Donors Directors of Uttara Kannada
Karwar, Kumta, Ankola, Honnavar, Bhatkal, Sirsi, Siddapur, Yellapur, Mundgod, Haliyal, Joida, Dandeli, Gokarna, Murdeshwar
Donate Blood, Save Life

ಇದು ಉತ್ತರ ಕನ್ನಡ ರಕ್ತದಾನಿಗಳ ವಿವರದ ಡೇಟಾಬೇಸ್ ಆ್ಯಪ್, ಜಿಲ್ಲೆಯಾದ್ಯಂತ
ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತದ ಸರಬರಾಜನ್ನು ಮಾಡಿಸಿಕೊಡುವ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದೇ *"ಉತ್ತರ ಕನ್ನಡ ಬ್ಲಡ್ ಡೊನರ್ಸ್ ಡೇಟಾ ಡೈರೆಕ್ಟರಿಯ ಮೂಲ ಉದ್ದೇಶ"*
ಹೆಚ್ಚಿನ ರೀತಿಯಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಲು ಉತ್ತೇಜಿಸಿ, ರಕ್ತದಾನಿಗಳ ಹೆಸರನ್ನು ನೊಂದಾಯಿಸಲು ಸಂಕಲ್ಪ ಮಾಡಿ,
ತಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಾ...

ನಮ್ಮ ಯುಕೆ ಎಡ್ಮಿನ್ ಹಾಗೂ ಸದಸ್ಯರ ಬಳಗ

Pro hodnocení programu se prosím nejprve přihlaste

Staženo
0 ×

TIP: Stahují se vám programy pomalu? Změřte si rychlost svého internetového připojení.